Haridasa Sahitya — Vyasadasa
Harikathamritasara 1 - Mangala charana sandhi
ಹರಿಕಥಾಮೃತಸಾರ 1 - ಮಂಗಳಾಚರಣ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀರಮಣಿ ಕರಕಮಲ ಪೂಜಿತ ಚಾರುಚರಣ ಸರೋಜ ಬ್ರಹ್ಮ ಸಮೀರವಾಣಿ ಫಣೀಂದ್ರವೀಂದ್ರ ಭವ ಇಂದ್ರ ಮುಖ ವಿನುತ ನೀರಜಭವಾಂಡ ಉದಯ ಸ್ಥಿತಿ ಕಾರಣನೆ ಕೈವಲ್ಯದಾಯಕ ನಾರಸಿಂಹನೆ ನಮಿಪೆ ಕರುಣಿಪುದು ಎಮಗೆ ಮಂಗಳವ||1|| ಜಗದುದರನ ಅತಿ ವಿಮಲ ಗುಣರೂಪಗಳನು ಆಲೋಚನದಿ ಭಾರತ ನಿಗಮತತಿಗಳ ಅತಿಕ್ರಮಿಸಿ ಕ್ರಿಯಾ ವಿಶೇಷಗಳ ಬಗೆಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳಿ ಹಿಗ್ಗುವ ತ್ರಿಗುಣಮಾನಿ ಮಹಾಲಕುಮಿ ಸಂತೈಸಲಿ ಅನುದಿನವು||2|| ನಿರುಪಮಾನಂದಾತ್ಮ ಭವ ನಿರ್ಜರ ಸಭಾಸಂಸೇವ್ಯ ಋಜುಗಣದ ಅರಸೆ ಸತ್ವಪ್ರಚುರ ವಾಣೀಮುಖಸರೋಜೇನ ಗರುಡ ಶೇಷ ಶಶಾಂಕದಳ ಶ…
Transliteration
managala-charana(Kannada) Hari kathamruta sara gurugala| Karunadindapanitu heluve | Parama bhagavadbhaktaridanadradi keluvadu || Shriramanikara kamala poojita | Charucharana saroja brahma sa | Meeravani phanendra, vindra, bhavendra mukhavinuta | Neerajabhavan0dodaya sthiti | Karanane kaivalyadayaka | Narasimhane namipe karunipudemage mangalava ||1|| Jagadudaranati vimalagunaru | Pagalanalochanadi…